librarian@kud.ac.in
0836-2215212 / 247
ಪ್ರೊ. ಶಿ.ಶಿ. ಬಸವನಾಳ ಗ್ರಂಥಾಲಯ ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ

ಗ್ರಂಥಾಲಯ ವಿನ್ಯಾಸ
(Library Layout)

 

 

ನೆಲ ಅಂತಸ್ತು

ಪ್ರವೇಶಿಕೆ
ಗ್ರಂಥಾಲಯದ ಪ್ರವೇಶ ದ್ವಾರವನ್ನು ದಾಟಿದಾಕ್ಷಣ ವಿಶಾಲವಾದ ಕೋಣೆ ಇದೆ ಅದರಲ್ಲಿ ವೈಯಕ್ತಿಕ ವಸ್ತುಗಳನ್ನು ಇಡುವ ಖಾನೆ, ಎರವಲು ಕೌಂಟರ್, ಅಂತರ್ ಜಾಲ ವೀಕ್ಷಣಾ ವಲಯ, ಗಣಕಯಂತ್ರ ವಿಭಾಗ ಮತ್ತು ಅಮೂಲ್ಯ ಪುಸ್ತಕಗಳ ಸಂಗ್ರಹ ಕೋಣೆಗಳನ್ನು ಒಳಗೊಂಡಿದೆ.

 

ವಿಶ್ವ ಸಂಸ್ಥೆಯ ಪ್ರಕಟಣೆಗಳ ಕೇಂದ್ರ
ವಿಶ್ವಸಂಸ್ಥೆ ಹಾಗೂ ಅಂಗ ಸಂಸ್ಥೆಗಳಾದ ವರ್ಡ್ ಬ್ಯಾಂಕ್, FAO ಇತ್ಯಾದಿ ಸಂಸ್ಥೆಗಳಿಂದ ದೇಣಿಗೆ ರೂಪದಲ್ಲಿ ಬಂದ ಪ್ರಕಟಣೆಗಳನ್ನು ಒಂದು ಗುಮ್ಮಟವಿರುವ ಸುಂದರವಾದ ಮತ್ತು ಸುಮಾರು 2250 ಚ ಫೂಟ್ ವಿಸ್ತೀರ್ಣದ ಕೋಣೆಯಲ್ಲಿ ಇಡಲಾಗಿದೆ. ಜೂನ 1967 ರಿಂದ ಪೆÇ್ರ.ಶಿ.ಶಿ.ಬಸವನಾಳ ಗ್ರಂಥಾಲಯವನ್ನು ವಿಶ್ವಸಂಸ್ಥೆ ಹಾಗೂ UNESCO, FAO, GATT, WHO, IMF, ICAQ,World Bank ಮುಂತಾದ ಸಂಸ್ಥೆಯ ಪ್ರಕಟಣೆಗಳ “ಠೇವಣಿ ಕೇಂದ್ರ” ವೆಂದು ಗುರುತಿಸಲಾಗಿದೆ.

 

ಪ್ರಚಲಿತ ನಿಯತಕಾಲಿಕೆಗಳು/ಪಿಹೆಚ್.ಡಿ ಪ್ರಬಂಧಗಳ ವಿಭಾಗ.
ಪ್ರಚಲಿತ ನಿಯಾತಕಾಲಿಕೆಗಳ ವಿಭಾಗವು ಗ್ರಂಥಾಲಯದ ನೆಲ ಮಹಡಿಯ ಓದುವ ಕೋಣೆಯ ಎಡಭಾಗದಲ್ಲಿದೆ. ಇಲ್ಲಿ ಪ್ರಚಲಿತ ನಿಯತ ಕಾಲಿಕೆಗಳನ್ನು ಅಚ್ಚುಕಟ್ಟಾಗಿ ಓದುಗರಿಗಾಗಿ ಪ್ರದರ್ಶಿಸಲಾಗಿದೆ. ಅಲ್ಲದೆ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಸಲ್ಲಿಸಿದ ಪಿಹೆಚ್.ಡಿ ಪ್ರಬಂಧಗಳ ಸಂಗ್ರಹ ಕೂಡ ಇಲ್ಲಿದೆ. ಅವಶ್ಯಕವಿರುವ ಸಂಶೋಧಕರು ಇವುಗಳನ್ನು ಪರಾಮರ್ಶಿಸಬಹುದಾಗಿದೆ.

 

ಓದುವ ಹಾಗೂ ಸಂಗ್ರಹ ಕೋಣೆಗಳು
ಪ್ರವೇಶ ಕೋಣೆಯಿಂದ ಪಶ್ಚಿಮದ ಕಡೆಗೆ ಹೋಗುವ ಹಜಾರ ಒಂದು ಓದುವ ಕೋಣೆ ಹಾಗೂ ಸಂಗ್ರಹ ಕೋಣೆಗೆ ಸಂಪರ್ಕ ಕಲ್ಪಿಸುತ್ತದೆ. ಓದುವ ಕೋಣೆಯು ಸುಮಾರು 150 ವಿದ್ಯಾರ್ಥಿಗಳು ಏಕ ಕಾಲದಲ್ಲಿ ಕುಳಿತು ಓದುವ ವ್ಯವಸ್ಥೆಯನ್ನು ಹೊಂದಿದೆ ಇದು ಸುಮಾರು 4900 ಚದರ ಅಡಿ ವಿಸ್ತೀರ್ಣ ಹೊಂದಿದೆ.

 

ನೆಲ ಅಂತಸ್ತಿನ ಸಂಗ್ರಹ ಕೋಣೆಯು ಸುಮಾರು 17,975 ಚದರ ಅಡಿ ವಿಸ್ತೀರ್ಣ ಹೊಂದಿದೆ. ಇದರಲ್ಲಿ ಈ ಕೆಳಗಿನ ವಿಭಾಗಗಳಿವೆ.

  1. ಪಠ್ಯಪುಸ್ತಕ ಸಂಗ್ರಹ

  2. ಪರಾಮರ್ಶನ ಗ್ರಂಥಗಳು

  3. ಸಂಸ್ಕೃತ, ಹಿಂದಿ, ಮರಾಠಿ, ಉರ್ದು ಮತ್ತು ಕನ್ನಡ ಭಾಷೆಗಳ ಸಾಹಿತ್ಯ ಸಂಗ್ರಹ

  4. Pocket Edition ಪುಸ್ತಕಗಳು

 

ಮಧ್ಯಂತಸ್ತು (Mezzanine)

ಗ್ರಂಥಾಲಯದ ನೆಲ ಅಂತಸ್ತು ಮತ್ತು ಮೊದಲ ಮಹಡಿಯ ನಡುವೆ ಮಧ್ಯಂತಸ್ತು ಇದ್ದು ಇದರಲ್ಲಿ ಕಂಪ್ಯೂಟರ್ ವಿಜ್ಞಾನ, ಗ್ರಂಥಾಲಯ ಹಾಗೂ ಮಾಹಿತಿ ವಿಜ್ಞಾನ, ಪತ್ರಿಕೋದ್ಯಮ, ಗಣಿತಶಾಸ್ತ್ರ, ಎಲೆಕ್ಟ್ರಾನಿಕ್ಸ್, ವಿಷಯಗಳಿಗೆ ಸಂಬಂಧಿಸಿದ ಪುಸ್ತಕಗಳ ಸಂಗ್ರಹವಿದೆ ಇದರ ಜೊತೆಗೆ ಅರ್ಥಶಾಸ್ತ್ರ, ನಿರ್ವಹಣಾಶಾಸ್ತ್ರ, ಸಮಾಜಶಾಸ್ತ್ರ, ಮಾನವಶಾಸ್ತ್ರ, ಸಮಾಜಕಾರ್ಯ, ಜನಪದ, ಕಾನೂನು ವಿಷಯಗಳ ನಿಯತಕಾಲಿಕೆಗಳ ಹಳೆಯ ಸಂಪುಟಗಳೊಂದಿಗೆ ಸರಕಾರದಿಂದ ಸ್ಥಾಪಿತವಾದ ಆಯೋಗಗಳ ವರದಿಗಳೂ ಕೂಡ ಸಂಗ್ರಹವಾಗಿವೆ.

 

ಮೊದಲ ಅಂತಸ್ತು

ಮೊದಲ ಅಂತಸ್ತಿನಲ್ಲಿ ಗ್ರಂಥಲಾಯದ ಬಹುತೇಕ ಸಂಗ್ರಹವನ್ನು ಹೊಂದಿದೆ. ಇದರಲ್ಲಿ ವಿಜ್ಞಾನ ನಿಖಾಯ, ಸಮಾಜ ವಿಜ್ಞಾನ ಹಾಗೂ ಮಾನವಿಕ ವಿಜ್ಞಾನ ನಿಖಾಯಗಳಿಗೆ ಸಂಬಂಧಿಸಿದ ಗ್ರಂಥ ಸಂಗ್ರಹವಿದೆ. ಓದುಗರ ಅನುಕೂಲಕ್ಕಾಗಿ ಇದರಲ್ಲಿ ಮತ್ತೊಂದು ವಿಶಾಲವಾದ ಓದುವ ಕೋಣೆಯನ್ನು ಕೂಡ ಹೊಂದಿದೆ ಇದೂ ಕೂಡ ಸುಮಾರು 150 ವಿದ್ಯಾರ್ಥಿಗಳು ಕುಳಿತುಕೊಳ್ಳುವ ವ್ಯವಸ್ಥೆ ಹೊಂದಿದೆ.

 

ಎರಡನೆ ಅಂತಸ್ತು

ಎರಡನೆ ಅಂತಸ್ತಿನಲ್ಲಿ ಬಹುತೇಕ ನಿಯತಕಾಲಿಕೆಗಳ ಬೈಂಡ್ ಮಾಡಿದ ಹಳೆಯ ಸಂಪುಟಗಳ ಸಂಗ್ರಹವಿದ್ದು ಇದರ ಜೊತೆಗೆ ಕೆಲವು ಸಮಾಜ ವಿಜ್ಞಾನ ವಿಷಯಗಳಾದ ಅರ್ಥಶಾಸ್ತ್ರ, ವಾಣಿಜ್ಯಶಾಸ್ತ್ರ, ನಿರ್ವಹಣಾಶಾಸ್ತ್ರ ಮತ್ತು ಸಮಾಜಶಾಸ್ತ್ರದ ಪುಸ್ತಕಗಳ ಸಂಗ್ರಹ ಹೊಂದಿದೆ.

 

ಆಡಳಿತ ವಿಭಾಗ

ಆಡಳಿತ ವಿಭಾಗವು ಪ್ರವೇಶ ಕೋಣೆಯ ಬಲಭಾಗಕ್ಕೆ ನೆ¯ ಅಂತಸ್ತಿನಲ್ಲಿ ಪೂರ್ವ ದಿಕ್ಕಿನಲ್ಲಿ ಸ್ಥಾಪಿತವಾಗಿದೆ ಇದು ಗ್ರಂಥಪಾಲಕರ ಕೋಣೆ ಪುಸ್ತಕ ಖರೀದಿ ವಿಭಾಗ, ತಾಂತ್ರಿಕ ವಿಭಾಗ, ರಟ್ಟು ಕಟ್ಟುವ ವಿಭಾಗ ಮತ್ತು ಲೆಕ್ಕ ಪತ್ರ ವಿಭಾಗಗಳಿವೆ. ಈ ಎಲ್ಲ ವಿಭಾಗಗಳು ತಮ್ಮ ಕಾರ್ಯಾವಧಿಯಲ್ಲಿ ಶಬ್ದ ಉಂಟು ಮಾಡುವ ಸಾಧ್ಯತೆ ಇರುವುದರಿಂದ ಇವು ವಿದ್ಯಾರ್ಥಿಗಳು ಓದುವ ಕೋಣೆಯಿಂದ ದೂರವಿದ್ದು ಶಾಂತತೆಯನ್ನು ಕಾಪಾಡುತ್ತವೆ.





  0836-2215212
   librarian@kud.ac.in

University Librarian
Prof. S. S. Basavanal Library Karnatak University, Pavate Nagar Dharwad - 580003 Karnataka. India